RSS
ಚಿತ್ರ

ಪ್ರಕೃತಿ

Scan

Advertisements
 

ಜನುಮ ದಿನದ ಶುಭ ಹಾರೈಕೆ

ಪ್ರೀತಿಯ ,

ನನ್ನ  ಬಾಳ ಸಂಗಾತಿಯೇ  ಇದೋScan12 ನಿನಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಜೀವನವೆಂದರೆ ಕಡಲ ಅಲೆಗಳಂತೆ ಸುಖ ದುಃಖವೆಂಬ ಏರಿಳಿತಗಳು ಹೋಗಿ ಬರುತ್ತಿರುತ್ತದೆ. ಆದರೂ ದುಃಖವನ್ನು ನಾನೇ ಭರಿಸಿ ನಿನಗೆ ಸುಖವೇ ಸಿಗುವಂತೆ ಸದಾ ಹಂಬಲಿಸುತ್ತೇನೆ. ಪ್ರೀತಿಯನ್ನು ಪ್ರವಾಹದಂತೆ ಹರಿಯ ಬಯಸುತ್ತೇನೆ. ನನ್ನ ಜೊತೆಗಿನ ಈ ಸುಂದರ ಬಾಳಿನ ದಾರಿಯುದ್ದಕ್ಕೂ ಸುಖ,ನೆಮ್ಮದಿ, ಸಂತೃಪ್ತಿಯ ಹೂವಿನ ಮಳೆಯನ್ನೇ ಸುರಿಸುತ್ತೇನೆ .

ನಿನ್ನ ಕಂಗಳಲ್ಲಲ್ಲಿ  ಕಾಣುವ ಕನಸುಗಳನ್ನು  ನನಸು ಮಾಡುವಂತಹ  ಶಕ್ತಿಯನ್ನು  ಮತ್ತು  ನಿನ್ನ ಹುಟ್ಟು ಹಬ್ಬದ  ಸಂಭ್ರಮವನ್ನು ನೂರಾರು ವರುಷ ಅನಂದಿಂದ ಆಚರಿಸುವಂತಹ ಅವಕಾಶವನ್ನು ಆ ದೇವರು ನನಗೆ ನೀಡಲಿ.

 

ಇತೀ  ನಿನ್ನೊಲವಿನ ,

ಪ್ರಮೋದ್

 
ಚಿತ್ರ

ಏನೋ ಒಂದು ಗೀಚಿದ್ದು

Scan-1

 
ಚಿತ್ರ

ಪ್ರಕೃತಿವೆಂಬುದೇ ಶಿವ

WhatsApp Image 2017-03-10 at 10.13.44 PM

 

ಟ್ಯಾಗ್ ಗಳು: , , ,

ಭಜನಾ ಭಕ್ತಿ

              ಹಿಂದೂ ಸಂಸ್ಕೃತಿಯ ಪ್ರತೀಕದಂತಿರುವ ಭಜನೆ ಇಂದು ಬಹುತೇಕ ಅಸ್ತಿತ್ವ ಕಳೆದುಕೊಳ್ಳುವ ಮಟ್ಟಕ್ಕೆ ತಲುಪಿಯಾಗಿದೆ. ದಿನ ಮುಗಿಯುತ್ತಾ ರಾತ್ರಿ ಆವರಿಸುವ ಮೊದಲು ತುಳಸಿ ಕಟ್ಟೆಗೆ ದೂಪ ,ದೀಪ ಬೆಳಗಿಸಿ,ಮನೆಯ ಹಿರಿ ಕಿರಿಯರೆಲ್ಲಾ ಸೇರಿ ಭಜಿಸುತ್ತಿದ್ದ ದೇವರ ಕೀರ್ತನೆಗಳು ದೃಶ್ಯ ಮಾಧ್ಯಮಗಳ ಹಾವಳಿಯಿಂದ ಮಾಯವಾಗಿದೆ.ದೇವರನ್ನು ನೇರವಾಗಿ ಒಲಿಸುವ ಸುಲಭ ಮಾರ್ಗವೆಂದರೆ ಅದು ಭಜನೆ . ಇಂತಹ ಒಂದು ಪ್ರಭಾವಶಾಲಿ ಮಾಧ್ಯಮ ಅಥವಾ ಅಸ್ತ್ರ ಇಂದು ತನ್ನ ಸತ್ವವನ್ನೇ ಕಳೆದುಕೊಂಡಿದೆ.ಮುಂದೊಂದು ದಿನ ಇದು ಯಾವ ಮಟ್ಟಕ್ಕೆ ಇಳಿಯುತ್ತೂ ಊಹಿಸಲಾಸಾಧ್ಯ.ಬೇಸರದ ವಿಷಯವೇನಂದರೆ ಎಲ್ಲಾ ಧರ್ಮದಲ್ಲೂ ತಮ್ಮ ತಮ್ಮ ಧರ್ಮದ ಆಚರಣಾ ಕ್ರಮಗಳನ್ನು ತಮ್ಮ ಮರಿ ಮಕ್ಕಳಿಗೆ ಅಚ್ಚುಕಟ್ಟಾಗಿ ಹೇಳಿಕೊಡುತ್ತಾರೆ .ಆದರೆ ಏನನ್ನೂ ಹೇಳಿ ಕೊಡದೆ,ತಮ್ಮದೇ ಧರ್ಮದ ಬಗ್ಗೆ ನಿರ್ಲ್ಯಕ್ಷ ಇರುವುದು ಅದು ನಮ್ಮಲ್ಲಿ ಮಾತ್ರ .


ಇಂತಹ ಸನ್ನಿವೇಶದಿಂದ ಹೊರಬರಲು ನಾವು ಅಂದರೆ ‘’ಶ್ರೀ ದುರ್ಗಾ ಮಿತ್ರ ವೃಂದ ಕುಂಜೂರು” ಕಳೆದ 10 ವರ್ಷಗಳಿಂದ ಪ್ರತಿ ಮನೆ ಮನೆಗೆ ತೆರಳಿ ದೇವರನ್ನೂ ಒಲಿಸುವ ಕೀರ್ತನೆಗಳನ್ನ ಭಜಿಸಿ ಎಲ್ಲರಿಗೂ ಭಜನೆಯ ಬಗ್ಗೆಯ ಮಹತ್ವ ಮತ್ತು ಆಸಕ್ತಿ ಮೂಡಿಸುವಂತಹ ಕಾರ್ಯವನ್ನು ನಡೆಸಿಕೊಂಡು ಬಂದಿದ್ದೇವೆ.ಅದಲ್ಲದೆ ಪ್ರತೀ ಶುಕ್ರವಾರ ಸಂಜೆ ವೇಳೆಗೆ ಕುಂಜೂರು ಶ್ರೀ ದುರ್ಗಾ ದೇವಳದ ಪ್ರಾಂಗಣದಲ್ಲಿ ಹಿರಿ,ಕಿರಿಯೆಲ್ಲರೂ ಸೇರಿ ಭಜನೆಯನ್ನು ಭಜಿಸುತ್ತೇವೆ.ಇದರಿಂದ ಪ್ರೇರಿತ ಗೊಂಡ ಎಷ್ಟೋ ಪುಟ್ಟ ಪುಟ್ಟ ಮಕ್ಕಳು ತಮ್ಮ ಮನೆಯಲ್ಲಿ ಸಂಜೆಯ ವೇಳೆಗೆ ದೇವರ ನಾಮಗಳನ್ನು ಭಜಿಸುತ್ತಿದ್ದಾರೆ.ಇದೂ ಇನ್ನಷ್ಟೂ ಹೆಚ್ಚುಗೊಂಡು ಪ್ರತೀ ಮನೆಯಲ್ಲೂ ಭಜನಾ ಕಾರ್ಯಕ್ರಮ ನಡೆಯಬೇಕು.ಮನೆಯಲ್ಲಿ ನಡೆಯುವ ಪ್ರತೀ ಶುಭ ಕಾರ್ಯದಲ್ಲಿ ಅರ್ದ ತಾಸಾದರೂ ಭಜನಾ ಕಾರ್ಯಕ್ರಮವನ್ನು ಕೈಗೊಳ್ಳಬೇಕು

ಮುಕ್ತಾಯದ ಮಾತಿಷ್ಟೇ “ ಭಕ್ತರನ್ನು ಭಗವಂತನ ಸನ್ನಿಧಿಗೆ, ಭಗವಂತನನ್ನು ಭಕ್ತರ ಸನ್ನಿಧಿಗೆ ಕೊಂಡೊಯ್ಯುವ ಶಕ್ತಿ ಭಜನೆಗಿದೆ ”
ಭಜನೆ ಭಗತವಂತನ ಉತ್ತಮ ಸೇವೆಯಾಗಿದ್ದು, ಇದರಿಂದ ನಮ್ಮ ಬಾಹ್ಯ ಮತ್ತು ಆತಂರಿಕ ಉನ್ನತಿ ಸಾಧ್ಯವಾಗುತ್ತದೆ

ಶ್ರೀ ದುರ್ಗಾ ಮಿತ್ರ ವೃಂದ ,ಕುಂಜೂರು

 
 

ಒಲವಿನ ಆಮಂತ್ರಣ

ಆತ್ಮೀಯ ಗೆಳೆಯರೇ ,

ನನ್ನ ಮದುವೆಯು ಬರುವ ನವೆಂಬರ್ ತಿಂಗಳಿನ ೧೫ನೇ ತಾರೀಖಿನಂದು, ಬೇಲಾಡಿ ಬಂಗೇರ್ ಜಾಲ್ ಶ್ರೀ ಶಿವರಾಮ ಶೆಟ್ರ ಮತ್ತು ಬೆಳುವಾಯಿ ಬರಕಲ ಗುತ್ತು ಶ್ರೀಮತಿ ಪದ್ಮಾವತಿ ಶೆಡ್ತಿ ಯವರ ತೃತೀಯ ಪುತ್ರಿಯಾದ  ಚಿlಸೌl ರಮ್ಯ ಳೊಂದಿಗೆ ಮುಂಡ್ಕೂರಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ” ನಾನ ಪಟೇಕರ್ ಸಭಾಂಗಣ”ದಲ್ಲಿ ನೆರವೇರಲಿದೆ . ಈ ಮಂಗಳಕಾರ್ಯಕ್ಕೆ ತಾವು ತಮ್ಮ ಕುಟುಂಬ ಹಾಗು ಮಿತ್ರರೊಂದಿಗೆ ಬಂದು ಯಥೋಚಿತ ಸತ್ಕಾರ ಸ್ವೀಕರಿಸಿ ವಧು-ವರರನ್ನು ಹಾರೈಸಬೇಕಾಗಿ ಕೋರಿಕೆ.

IMAGE-6

Ramyapramod-3

ಸ್ಥಳ: ನಾನಾ ಪಟೇಕರ್ ಸಭಾಂಗಣ , ಮುಂಡ್ಕೂರು ,ಕಾರ್ಕಳ ತಾಲೂಕು ,ಉಡುಪಿ.

ಸಮಯ : ಅಪರಾಹ್ನ ೧೨.೨೫ 

ತಮ್ಮ ಆಗಮನಾಭಿಲಾಷಿ ,

ಪ್ರಮೋದ ಶೆಟ್ಟಿ 

ಕಿನ್ನೋಡಿಗುತ್ತು ,ಎಲ್ಲೂರು .ಉಡುಪಿ 

ಕೃಪೆ -ನನ್ನಕನಸು-ಚಿಗುರು ಬ್ಲಾಗ್

 
2 ಟಿಪ್ಪಣಿಗಳು

Posted by on ಸೆಪ್ಟೆಂಬರ್ 27, 2015 in ಇತರ

 

ಟ್ಯಾಗ್ ಗಳು: , ,

ಚಿತ್ರ

ಕೊಟ್ಟಿಗೆ

ಕೊಟ್ಟಿಗೆ

 

ಟ್ಯಾಗ್ ಗಳು: , , , ,